ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯಾ ತೇನೆ ಬಾಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗಡ ನಿಲುಕಿನಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತಾರುಗಳಲ್ಲಿ
ನಿತ್ಯೋತ್ಸವ ತಾಯೇ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೇ ನಿತ್ಯೋತ್ಸವ
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಲೆಯಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತಿಯಲ್ಲಿ
ನಿತ್ಯೋತ್ಸವ ತಾಯೇ ನಿತ್ಯೋತ್ಸವ
ಹಲವೆನ್ನದ ಹಿರಿಮೆಯೇ ಕುಲವೆನ್ನದ ಗರಿಮೆಯೇ
ಸದ್ವಿಕಾಸಶೀಲ ನುಡಿಯ ಲೋಕವೃತ ಸೀಮೆಯೇ
ಈ ವಾತ್ಸರ ನಿರ್ಮಾತ್ಸರ ಮನದುದಾರ ಮಹಿಮೆಯೇ
ನಿತ್ಯೋತ್ಸವ ತಾಯೇ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ
ತಾಯೇ ನಿತ್ಯೋತ್ಸವ
K S ನಿಸಾರ್ ಅಹ್ಮದ್.
No comments:
Post a Comment